Breaking News

ಆನ್​ಲೈನ್ ಗೇಮ್​ನಲ್ಲಿ ಹಣ ಕಳೆದುಕೊಂಡ ಯುವಕ ಸಾವಿಗೆ ಶರಣು..!

ಶಿರಸಿ : ಆನ್​ಲೈನ್​​ ಗೇಮ್ ಬಗ್ಗೆ ಹುಷಾರ್!. ಇವುಗಳು​​ ಜೀವನ ಮತ್ತು ಜೀವ ಎರಡನ್ನೂ ಹಾಳು​ ಮಾಡುತ್ತವೆ ಎಂದು ಅನೇಕರು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಆದರೂ ಇಲ್ಲೋರ್ವ ಆನ್​ಲೈನ್​​ ಗೇಮ್​ ಹುಚ್ಚಿಗೆ ತನ್ನ ಬದುಕನ್ನೇ ಕಳೆದುಕೊಂಡಿದ್ದಾನೆ.

ಆನ್​ಲೈನ್ ಗೇಮ್​ನಲ್ಲಿ ಹಣ ಕಳೆದುಕೊಂಡ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.‌

ಶಿರಸಿ ತಾಲೂಕಿನ ಬಾಳೆತೋಟದ ವಿಜೇತ ಹೆಗಡೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತನಿಗೆ ಆನ್​ಲೈನ್ ಗೇಮಿನ ಗೀಳಿದ್ದು, 9 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾನೆ.

ಅಷ್ಟೇ ಅಲ್ಲದೆ, ಕೆಲವರಿಂದ ಕೈಗಡ ಸಾಲ ಸಹ ಪಡೆದುಕೊಂಡಿದ್ದ. ಹಣ ಕಳೆದು ಹೋದ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಡೆತ್ ನೋಟ್ ಬರೆದಿಟ್ಟು ಮನೆಯ ಸಮೀಪದ ಬೆಟ್ಟದಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...