Breaking News

ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ನಾಪತ್ತೆಯಾಗಿದ್ದ ತಂದೆ ಮಂಗಳೂರಿನಲ್ಲಿ ಪತ್ತೆ..!!

ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ತಂದೆ ನಾಪತ್ತೆಯಾಗಿದ್ದು, ಇದೀಗ ನಾಪತ್ತೆಯಾಗಿದ್ದ ವ್ಯಕ್ತಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ (60) ನಾಪತ್ತೆಯಾದ ವ್ಯಕ್ತಿ. ಸಂಪ್ಯ ಗ್ರಾಮಾಂತರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿಕೊಟ್ಟ ಘಟನೆ ನಡೆದಿದೆ. ಪಿ ಎಸ್ ಐ ಧನಂಜಯ ಬಿ.ಸಿ ಮಾರ್ಗದರ್ಶನದಂತೆ ಠಾಣಾ ಸಿಬ್ಬಂದಿಗಳಾದ ಪ್ರವೀಣ್, ಮುನಿಯ ನಾಯ್ಕ , ಅದ್ರಾಮ್, ಪ್ರಶಾಂತ ಅವರು ಉಮ್ಮರ್‌ರನ್ನು ಸಂಬಂಧಿಕರ ಸಹಕಾರದೊಂದಿಗೆ ಮಂಗಳೂರಿನಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆತಂದು ಅವರ ಮಗನಾದ ಆಸೀಫ್ ರವರೊಂದಿಗೆ ಕಳುಹಿಸಿಕೊಟ್ಟರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...