Breaking News

ಬೆಳ್ಳಿ ಅಸಲಿಯೋ ನಕಲಿಯೊ ಹೀಗೆ ಪರೀಕ್ಷಿಸಿ

ಬಂಗಾರದಂತೆ ಬೆಳ್ಳಿಯನ್ನೂ ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡಬಹುದು. ಈ ಕೆಳಗಿನ ವಿಧಾನ ಅನುಸರಿಸಿ ಇದರಿಂದ ನೀವು ಪ್ರೀತಿಯಿಂದ ಕೊಂಡ ಬೆಳ್ಳಿಯ ಅಸಲಿತನವನ್ನು ಕಂಡುಹಿಡಿಯಬಹುದು.

ನೀವು ಕೊಂಡ ಬೆಳ್ಳಿಯ ವಸ್ತು ಸಮತಟ್ಟಾದ ಮೇಲ್ಭಾಗವನ್ನು ಹೊಂದಿದ್ದರೆ ಅದರ ಮೇಲೆ ಐಸ್ ಕ್ಯೂಬ್ ಇಡಿ.

ತಕ್ಷಣವೇ ಅದು ಕರಗಿ ನೀರಾದರೆ ನಿಮ್ಮ ಬೆಳ್ಳಿ ಅಸಲಿ ಎಂದಾಗುತ್ತದೆ. ಏಕೆಂದರೆ ಬೆಳ್ಳಿ ಉಷ್ಣವಾಹಕವಾದ್ದರಿಂದ ಇದರ ಮೇಲೆ ಇಟ್ಟ ಐಸ್ ತಕ್ಷಣ ಕರಗಲೇಬೇಕು.

ಬೆಳ್ಳಿಯ ವಸ್ತುವಿನ ಮೇಲೆ ಒಂದು ಹನಿ ಬ್ಲೀಚಿಂಗ್ ಹಾಕಿದಾಗ ಬೆಳ್ಳಿ ತನ್ನ ಬಣ್ಣ ಬದಲಾಯಿಸಿ ಕಂದು ಬಣ್ಣಕ್ಕೆ ತಿರುಗಿದರೂ ನಿಮ್ಮ ಬೆಳ್ಳಿ ಅಸಲಿ ಎಂದು ನಂಬಬಹುದು.

ಅಯಸ್ಕಾಂತವನ್ನು ಬೆಳ್ಳಿಯ ಬಳಿ ತಂದು ನೋಡಿ. ಆಗ ಅದು ಆಕರ್ಷಿತವಾದರೆ ಆ ಬೆಳ್ಳಿಯೊಂದಿಗೆ ಇತರ ವಸ್ತುಗಳೂ ಬೆರೆತಿವೆ ಎಂದರ್ಥ. ಅಂದರೆ ಆ ಬೆಳ್ಳಿ ನಕಲಿಯಾಗಿರಬಹುದು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...