Breaking News

ಮಂಗಳೂರು: ರಸ್ತೆ ಅಪಘಾತ; ಸ್ಕೂಟರ್‌ ಸವಾರ ಮೃತ್ಯು..!

ಮಂಗಳೂರು: ನಗರ ಹೊರವಲಯದ ಪಣಂಬೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತಕ್ಕೆ ಸ್ಕೂಟರ್‌ ಸವಾರರೊಬ್ಬರು ಬಲಿಯಾಗಿದ್ದಾರೆ.

ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದಿದ್ದು, ಈ ಸಂದರ್ಭದಲ್ಲಿ ಸವಾರನೂ ರಸ್ತೆಗೆ ಬಿದ್ದಿದ್ದಾರೆ.

ಇದೇ ವೇಳೆ ಹಿಂಬದಿಯಿಂದ ಬಂದ ಸರಕು ತುಂಬಿದ ಲಾರಿ ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟರ್‌ ಮತ್ತು ಸವಾರನ ಮೇಲೆ ಚಲಿಸಿದೆ.

ಇದರಿಂದ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಸ್ಕೂಟರ್ ಸವಾರನ ಗುರುತು ಪತ್ತೆಯಾಗಿಲ್ಲ.

ಮಂಗಳೂರು ನಗರ ಉತ್ತರ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಸಹಿತ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಮಳೆಯಿಂದಾಗಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮರಣಾಂತಿಕವಾಗಿ ಪರಿಣಮಿಸಿವೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...