Breaking News

ಮಂಗಳೂರು: ಖ್ಯಾತ ಕೊಂಕಣಿ ಗಾಯಕ ಕ್ಲೌಡ್ ಡಿ’ ಸೋಜಾ ವಿಧಿವಶ

ಮಂಗಳೂರು: ಕೊಂಕಣಿ ಸಂಗೀತ ಲೋಕದ ಪ್ರಸಿದ್ಧ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಕ್ಲೌಡ್ ಡಿ’ಸೋಜಾ(67) ಅವರು ಜುಲೈ 24ರ ಇಂದು   ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಸುಮಾರು 61 ಸಂಗೀತ ‘ನೈಟ್ಸ್’ ಗಳನ್ನು ಪ್ರಸ್ತುತ ಪಡಿಸಿರುವ ಕ್ಲೌಡ್ ಡಿಸೋಜಾ ಅವರು ಗಾಯಕ ಮಾತ್ರವಲ್ಲದೆ ಡ್ರಮ್ಸ್ ಮತ್ತು ಗಿಟಾರ್‌‌ನಂತಹ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಅಲ್ಲದೆ ಕ್ಲೌಡ್ ಅವರು ಬರಹಗಾರ, ನಿರ್ದೇಶಕ ಮತ್ತು ನಟರಾಗಿ ಸಾಧನೆ ಮಾಡಿದ್ದು, ಸಾಮಾಜಿಕ, ಐತಿಹಾಸಿಕ ಮತ್ತು ಧಾರ್ಮಿಕ ವಿಷಯಗಳ ಮೇಲೆ 40 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಕ್ಲೌಡ್ ಅವರು 15 ಸಂಗೀತ ಸಿಡಿಗಳನ್ನು ಬಿಡುಗಡೆಗೊಳಿಸಿದ್ದು, ಇತರ ಕಲಾವಿದರ ಆಲ್ಬಮ್‌ಗಳಿಗೆ ರಿದಮ್ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಕ್ಲೌಡ್ ಅವರ ಧ್ವನಿ ಮತ್ತು ಧಾರ್ಮಿಕ ನಾಟಕಗಳಿಗೆ ‘ಸಂದೇಶ ಪ್ರಶಸ್ತಿ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಮತ್ತು ಪ್ರಶಸ್ತಿಗಳು ಲಭಿಸಿದೆ. ಇವರ ನಿಧನಕ್ಕೆ ಕೊಂಕಣಿ ಸಂಗೀತ ಲೋಕ ಸಂತಾಪ ವ್ಯಕ್ತಪಡಿಸಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...