Breaking News

ಗೃಹಲಕ್ಷ್ಮೀ ಯೋಜನೆಯ ನಕಲಿ ಸರ್ಟಿಫಿಕೇಟ್ ಹಂಚುತ್ತಿದ್ದ ಸೈಬರ್ ಸೆಂಟರ್ ಮಾಲೀಕ ಅರೆಸ್ಟ್..!

ಮೈಸೂರು: ಮೈಸೂರಿನಲ್ಲಿ ಗೃಹಲಕ್ಷಿ ಯೋಜನೆ ನಕಲಿ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಈತ ಮೇಟಗಳ್ಳಿ ಸುಧಾಮೂರ್ತಿ ರಸ್ತೆಯಲ್ಲಿರುವ ‘ನಕುಲ್ ನೆಟ್​ವರ್ಕ್’ ಹೆಸರಿನಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ.

ಇಲ್ಲಿ ಗೃಹಲಕ್ಷ್ಮೀ ಯೋಜನೆಯ ನಕಲಿ ಸರ್ಟಿಫಿಕೇಟ್​ಗಳನ್ನು ಸಿದ್ಧಪಡಿಸಿ ಜನರನ್ನು ಯಾಮಾರಿಸುತ್ತಿದ್ದ. ಈ ಕುರಿತಾಗಿ ಸುಕೇಶ್ ಕುಮಾರ್ ಎಂಬುವವರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಎಸಿಪಿ ಗಜೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ದಾಳಿಯ ಸಂದರ್ಭದಲ್ಲಿ ಫೇಕ್ ಸರ್ಟಿಫಿಕೇಟ್​ಗಳನ್ನ ವಶಕ್ಕೆ ಪಡೆದುಕೊಂಡಿರುವ ಪೋಲೀಸರು ಸೈಬರ್ ಸೆಂಟರ್​ಗೆ ಬೀಗ ಜಡಿದಿದ್ದಾರೆ. ಈತ ನಕುಲ್ ನೆಟ್​ವರ್ಲ್ಡ್ ಎಂಬ ಅನಧಿಕೃತ ಸೇವಾ ಕೇಂದ್ರ ಪ್ರಾರಂಭಿಸಿ ಗೃಹಲಕ್ಷ್ಮಿ ಯೋಜನೆಯ ಫೇಕ್ ಸರ್ಟಿಫಿಕೇಟ್ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಮೇಟಗಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...