Breaking News

ಮಂಗಳೂರು: ಬಾವುಟ ಗುಡ್ಡೆಯ ಇನ್ಶೂರೆನ್ಸ್ ಸಂಸ್ಥೆಯೊಂದರ ಕಚೇರಿಯಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ಬಾವುಟಗುಡ್ಡೆಯ ಇನ್ಶೂರೆನ್ಸ್ ಸಂಸ್ಥೆಯೊಂದರ ಕಚೇರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಕಂಪ್ಯೂಟರ್, ಎಸಿ ಮತ್ತಿತರ ವಸ್ತುಗಳು ಸುಟ್ಟುಹೋದ ಘಟನೆ ನಡೆದಿದೆ. ಬಾವುಟಗುಡ್ಡೆಯ ಕೆಎಂಸಿ ದಂತವೈದ್ಯಕೀಯ ಕಾಲೇಜು ಎದುರುಗಡೆಯಿರುವ ಮ್ಯಾಕ್ಸಿಮಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಮೂರನೇ ಮಹಡಿಯಲ್ಲಿರುವ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ‌ದಳ ಸ್ಥಳಕ್ಕೆ ಆಗಮಿಸಿ ಸುಮಾರು ಎರಡು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.‌ ಆದರೆ ಬೆಂಕಿ ಹೊರಗೆ ಹರಡಿಲ್ಲದ ಕಾರಣ ಯಾವುದೇ ದೊಡ್ಡ ಮಟ್ಟದ ಅನಾಹುತ, ಮತ್ತಿತರ ಹಾನಿ ಸಂಭವಿಸಿಲ್ಲ. ಆದರೆ ದಟ್ಟ ಹೊಗೆ ಆವರಿಸಿ ಆತಂಕ‌ ಸೃಷ್ಟಿಯಾಗಿತ್ತು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...