Breaking News

40ಕ್ಕೂ ಹೆಚ್ಚು ಮಂದಿಗೆ ಕಚ್ಚಿ ಸಾವನ್ನಪ್ಪಿದ ʻರೇಬೀಸ್ ಸೋಂಕಿತ ಬಾಲಕಿʼ

ವದೆಹಲಿ: ಉತ್ತರ ಪ್ರದೇಶದ ಜಲೌನ್‌ನ ಆಘಾತಕಾರಿ ಘಟನೆಯೊಂದರಲ್ಲಿ, ಎರಡೂವರೆ ವರ್ಷದ ಬಾಲಕಿಗೆ ಬೀದಿ ನಾಯಿ ಕಚ್ಚಿತ್ತು. ಆದರೆ, ಆಕೆ ಸಾಯುವ ಮುನ್ನ ಆಕೆಯ ಗ್ರಾಮದಲ್ಲಿ ಸುಮಾರು 40 ಜನರಿಗೆ ಕಚ್ಚಿದ್ದಾಳೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಎರಡು ವಾರಗಳ ಹಿಂದೆ ಬಾಲಕಿಯ ಮೇಲೆ ನಾಯಿ ದಾಳಿ ಮಾಡಿತ್ತು.

ನಂತರ, ಬಾಲಕಿ ಗ್ರಾಮದ ಜನರನ್ನು ಕಚ್ಚಲು ಪ್ರಾರಂಭಿಸಿದಳು. ಆಕೆಯ ಕುಟುಂಬವು ಅವಳನ್ನು ಚಿಕಿತ್ಸೆಗಾಗಿ ಕ್ವಾಕ್‌ಗೆ ಕರೆದೊಯ್ದಿತು. ಆದ್ರೂ, ಆಕೆಯ ಪರಿಸ್ಥಿತಿಯು ಹದಗೆಟ್ಟಿ ರೇಬೀಸ್‌ನ ಲಕ್ಷಣಗಳನ್ನು ತೋರಿಸಲಾರಂಭಿಸಿದಳು. ನಂತ್ರ, ಬಾಲಕಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಬಾಲಕಿ ಕೆಲವರಿಗೆ ಕಚ್ಚಿದ್ದಾಳೆ ಮತ್ತು ಇತರರನ್ನು ತನ್ನ ಉಗುರುಗಳಿಂದ ಪರಚಿದ್ದಾಳೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕ್ಯೋಲಾರಿ ಗ್ರಾಮದಿಂದ 40ಕ್ಕೂ ಹೆಚ್ಚು ಮಂದಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ. ಆದರೆ, ನಮ್ಮಲ್ಲಿ ಸಾಕಷ್ಟು ರೇಬಿಸ್ ಚುಚ್ಚುಮದ್ದು ಲಭ್ಯವಿರುವುದರಿಂದ ಗಾಬರಿ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಉಸ್ತುವಾರಿ ದಿನೇಶ್ ಬರ್ದರಿಯಾ ಸುದ್ದಿಗಾರರಿಗೆ ತಿಳಿಸಿದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...