Breaking News

ಮಂಗಳೂರು: MDMA ಸಮೇತ ಮೂವರು ಡ್ರಗ್ ಪೆಡ್ಲರ್​ಗಳ ಬಂಧಿಸಿದ ಪೋಲಿಸರು

ಮಂಗಳೂರು ಹೊರವಲಯ ಉಳ್ಳಾಲ ಬಳಿ ಕಾರ್ಯಾಚರಣೆ ನಡೆಸಿ MDMA ಸಮೇತ ಮೂವರು ಡ್ರಗ್ ಪೆಡ್ಲರ್​ಗಳನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧೀತರನ್ನು ಉಳ್ಳಾಲದ ಮೊಹಮ್ಮದ್ ಹಫೀಝ್, ಸಜಿಪದ ಅಮೀರ್ ಅಲಿಯಾಸ್ ಅಮ್ಮಿ, ದಾಸರಗುಡ್ಡೆ ಮನೆ ನಿವಾಸಿ ಜಾಕೀರ್ ಹುಸೇನ್ ಅಲಿಯಾಸ್ ತಾಚೀ ಅಂತ ತಿಳಿದು ಬಂದಿದೆ.

ಇನ್ನೂ ಬಂಧಿತರಿಂದ ಪೋಲಿಸರು 200 ಗ್ರಾಂ ತೂಕದ 10 ಲಕ್ಷ ಮೌಲ್ಯದ MDMA ವಶಪಡಿಸಿಕೊಂಡಿದ್ದಾರೆ ಆಂತ ತಿಳಿದು ಬಂದಿದೆ.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್​ಗಿರಿ ಮುಂದುವರೆದಿದ್ದು, ಧರ್ಮಸ್ಥಳದ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಮುಸ್ಲಿಂ ಆಟೋ ಚಾಲಕನ ಮೇಲೆ ನಿನ್ನೆ ರಾತ್ರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಆಟೋ ಚಾಲಕ ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್(22) ಮೇಲೆ ಹಲ್ಲೆ‌ ಆಟೋದಲ್ಲಿ ಯುವತಿಯನ್ನು ಕೂರಿಸಿಕೊಂಡು ಹೋಗ್ತಿದ್ದಾಗ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಆಶೀಕ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಬಗ್ಗೆ ಧರ್ಮಸ್ಥಳ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆ ಮಾಡಿದವರನ್ನು ಬಂಧಿಸಲು ಕಾರ್ಯಚರಣೆ ಶುರು ಮಾಡಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...