Breaking News

‘ರಾಜ್ಯ ಸರ್ಕಾರ’ದಿಂದ ‘ಫ್ರೀ ವಿದ್ಯುತ್’ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಈ ತಿಂಗಳು ಕಟ್ಟಲೇ ಬೇಕು ‘ಬಿಲ್’

ಬೆಂಗಳೂರು: ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಯೋಜನೆಗೆ ನೋಂದಾಯಿಸಿಕೊಂಡವರಿಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ಎಂದು ರಾಜ್ಯ ಸರ್ಕಾರ ಹೇಳಿತ್ತು. ಇದೀಗ ವಿವಿಧ ಎಸ್ಕಾಂಗಳಿಂದ ವಿದ್ಯುತ್ ಬಿಲ್ ನೀಡಲಾಗಿದ್ದು, ಫ್ರೀ ವಿದ್ಯುತ್ ನಿರೀಕ್ಷೆಯಲ್ಲಿದ್ದವರಿಗೆ ನೂರಾರು ರೂಪಾಯಿ ಬಿಲ್ ನೀಡಿ ಬಿಗ್ ಶಾಕ್ ನೀಡಲಾಗಿದೆ.

 

ಹೌದು ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡವರಿಗೂ ವಿದ್ಯುತ್ ಉಚಿತವಿಲ್ಲದೇ, 100 ರಿಂದ 300ರವರೆಗೆ ವಿದ್ಯುತ್ ಬಿಲ್ ಬಾಕಿ ಕಟ್ಟುವಂತೆ ನೀಡಲಾಗಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್. ಅದಕ್ಕಿಂತ ಹೆಚ್ಚು ಬಳಕೆ ಮಾಡಿದವರು ಸಂಪೂರ್ಣ ಬಿಲ್ ಕಟ್ಟಬೇಕು ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದ್ರೇ ಅದಕ್ಕೂ ಕಡಿಮೆ ಬಳಕೆ ಮಾಡಿದವರಿಗೂ ಬಿಲ್ ನೀಡಿ ಶಾಕ್ ನೀಡಲಾಗಿದೆ.

100 ರಿಂದ 200ಕ್ಕೂ ಹೆಚ್ಚು ಬಿಲ್

ಜುಲೈ.27ರ ಒಳಗಾಗಿ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡವರಿಗೆ 200 ಯೂನಿಟ್ ವರೆಗೆ ಬಳಕೆ ಮಾಡುವಂತ ವಿದ್ಯುತ್ ಗೆ ಉಚಿತ ಎಂಬುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದ್ರೇ ಅಷ್ಟು ಬಳಕೆ ಮಾಡದೇ ಕೇವಲ 57, 58 ಯೂನಿಟ್ ವಿದ್ಯುತ್ ಬಳಕೆ ಮಾಡಿದವರಿಗೂ ಎಸ್ಕಾಂ ನಿಗದಿ ಪಡಿಸಿದಂತ ಫ್ರೀ ಯೂನಿಟ್ 8, 9, 10 ಯೂನಿಟ್ ಗಳಿಗೆ ಮಾತ್ರ ಉಚಿತ ನೀಡಿ, ಮಿಕ್ಕ ಬಳಕೆಯ ವಿದ್ಯುತ್ ಗೆ ಗ್ರಾಹಕರಿಗೆ 100 ರಿಂದ 200ಕ್ಕೂ ಹೆಚ್ಚು ಬಿಲ್ ನೀಡಲಾಗಿದೆ.

ಎಸ್ಕಾಂನಿಂದಲೇ ಫ್ರೀ ಯೂನಿಟ್ ಫಿಕ್ಸ್

ಬಹುತೇಕ ವಿದ್ಯುತ್ ಗ್ರಾಹಕರು ತಾವು ಪ್ರತಿ ತಿಂಗಳು 100 ಯೂನಿಟ್ ವರೆಗೆ ಬಳಕೆ ಮಾಡ್ತೀವಿ. 200 ಯೂನಿಟ್ ವರೆಗೆ ಏನೂ ಯೂಸ್ ಮಾಡೋದಲಿಲ್. ನಮಗೆ ಶೂನ್ಯ ಬಿಲ್ ಬರಲಿದೆ ಎಂಬುದಾಗಿ ಭಾವಿಸಿದ್ದರು. ಆದ್ರೇ ಎಸ್ಕಾಂಗಳಿಂದಲೇ ಕಳೆದ ಒಂದು ವರ್ಷದ ಬಳಕೆಯ ಯೂನಿಟ್ ಗಳಲ್ಲಿ ಸರಾಸರಿ ಲೆಕ್ಕ ಹಾಕಿ ಇಂತಿಷ್ಟು ಯೂನಿಟ್ ಮಾತ್ರವೇ ಫ್ರೀ ಎಂಬುದಾಗಿ ಫಿಕ್ಸ್ ಮಾಡಲಾಗಿದೆ.

ಈ ತಿಂಗಳು ಕಟ್ಟಲೇ ಬೇಕು ಬಿಲ್

ಜನರಿಗೆ ಈ ತಿಂಗಳು ಶೂನ್ಯ ಬಿಲ್ ಬರಲಿದೆ ಎಂಬುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದ್ರೇ ಶೂನ್ಯ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ಎನ್ನುವಂತೆ ಎಸ್ಕಾಂಗಳು ನಿಗದಿ ಪಡಿಸಿದ್ದಂತ 8, 9, 10 ಯೂನಿಟ್ ಗಳಿಗೆ ಮಾತ್ರವೇ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಅನ್ವಯಿಸಲಾಗಿದೆ. ಅದಷ್ಟು ಮಾತ್ರ ಫ್ರೀ ಬಿಟ್ಟು, ಇನ್ನುಳಿದಂತ ಬಳಕೆಯ ಯೂನಿಟ್ ಗೆ ಬಿಲ್ ನೀಡಲಾಗಿದೆ.

 

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...