Breaking News

ಆಸ್ತಿಗಾಗಿ ಪತಿಗೆ ವಿಷ ಕೊಟ್ಟು ಕೊಲೆಗೆ ಯತ್ನಿಸಿದ ಪತ್ನಿ

ಬೆಳಗಾವಿ: ಆಸ್ತಿಗಾಗಿ ಸಾವಕ್ಕ ಎಂಬ ಮಹಿಳೆ ಸಹೋದರನ ಮಾತು ಕೇಳಿ ತನ್ನ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ. ವಿಷ ಬೆರೆಸಿದ ಉಪ್ಪಿಟ್ಟು ತಿಂದ ನಿಂಗಪ್ಪಾ ಹಮಾನಿ (35) ಸ್ಥಿತಿ ಗಂಭೀರವಾಗಿದೆ.

ಎರಡು ಎಕರೆ ಆಸ್ತಿಗಾಗಿ ಸಹೋದರನ ಮಾತು ಕೇಳಿ ಸಾವಕ್ಕ ಹಮಾನಿ (32) ತನ್ನ ಪತಿ ನಿಂಗಪ್ಪಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಟ್ಟಿದ್ದಾಳೆ. ಉಪ್ಪಿಟ್ಟು ತಿಂದ ನಂತರ ನಿಂಗಪ್ಪ ಒದ್ದಾಡುವುದನ್ನ ಕಂಡ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಐಸಿಯುವಿನಲ್ಲಿ ನಿಂಗಪ್ಪನಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಪತಿಗೆ ವಿಷ ಬೆರೆಸಿದ ನಂತರ ಯಾರಿಗೂ ಅನುಮಾನ ಬರಬಾರದೆಂದು ವಿಷ ಬೆರೆಸಿದ್ದ ಉಪ್ಪಿಟ್ಟನ್ನು ಸಾವಕ್ಕ ಹಮಾನಿ ತಿಪ್ಪೆಗೆಸೆದಿದ್ದಳು. ಆದರೆ ತಿಪ್ಪೆಗೆಸೆದಿದ್ದ ಉಪ್ಪಿಟ್ಟನ್ನು ಸೇವಿಸಿ ಮೂಕ ಪ್ರಾಣಿಗಳಾದ ಬೆಕ್ಕು ಮತ್ತು ನಾಯಿ  ಸಾವನ್ನಪ್ಪಿವೆ. ಪ್ರಕರಣ ಸಂಬಂಧ ಸವದತ್ತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಾದ ಸಾವಕ್ಕ ಮತ್ತು ಆಕೆಯ ಸಹೋದರ ಫಕೀರಪ್ಪ ಸಿಂದೋಗಿ ಅವರನ್ನು ಬಂಧಿಸಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...