Breaking News

ವಂಚನೆ ಪ್ರಕರಣ : ಆರೋಪಿಗಳ ಆಸ್ತಿ ಮುಟ್ಟುಗೋಲು

ಕಾಸರಗೋಡು: ಫ್ಯಾಶನ್‌ ಗೋಲ್ಡ್‌ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ಲಿಂ ಲೀಗ್‌ ನಾಯಕರಾದ ಚಂದೇರದ ಪೂಕೋಯ ತಂಙಳ್‌, ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Fashion Jewellery MD accuses directors of smuggling gold | Kerala News |  Manorama English

ರಾಜ್ಯ ಮಟ್ಟದ ಅಧಿಕಾರಿಯಾದ ರಾಜ್ಯ ಫಿನಾನ್ಸ್‌ ಸೆಕ್ರೆಟರಿ ಸಂಜಯ್‌ಎಂ. ಕೌಲ್‌ ಅವರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆ ವಹಿಸಿದ ಕಣ್ಣೂರು ಕ್ರೈಂ ಬ್ರ್ಯಾಂಚ್‌ ಎಸ್‌ಪಿ ಪಿ.ವಿ. ಸದಾನಂದನ್‌ ಅವರ ವರದಿಯ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.ಕಂಪೆನಿಯ ಚೇರ್ಮನ್‌ ಆಗಿರುವ ಖಮರುದ್ದೀನ್‌, ಪೂಕೋಯ ತಂಙಳ್‌ ಅವರ ಹೆಸರಿನಲ್ಲಿ ಪಯ್ಯನ್ನೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ಕೊಠಡಿಗಳನ್ನೊಳಗೊಂಡ ಫ್ಯಾಶನ್‌ ಆರ್ನಮೆಂಟ್‌ ಜ್ಯುವೆಲ್ಲರಿ ಕಟ್ಟಡ ಹಾಗೂ ಬೆಂಗಳೂರು ಸಿಲಿಕುಂಡ ವಿಲೇಜ್‌ನಲ್ಲಿ ಪೂಕೋಯ ತಂಙಳ್‌ ಹೆಸರಿನಲ್ಲಿರುವ 1 ಎಕ್ರೆ ಭೂಮಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...