Breaking News

ಗೌರಿ ಲಂಕೇಶ್ ಹತ್ಯೆಯ ಕರಾಳ ದಿನಕ್ಕೆ6 ವರ್ಷ ನುಡಿನಮನ ಸಲ್ಲಿಸಿದ ಹೋರಾಟಗಾರರು, ಒಡನಾಡಿಗಳು

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ 6 ವರ್ಷಗಳು ಕಳೆದಿವೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೌರಿ ಸಮಾಧಿಯ ಬಳಿ ಸೇರಿದ ಹೋರಾಟಗಾರರು, ಒಡನಾಡಿಗಳು ನುಡಿನಮನ ಸಲ್ಲಿಸಿದರು.ಈ ಗೌರವನಮನ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಗೌರಿ ಲಂಕೇಶ್ ಅವರ ಒಡನಾಡಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ಹೋರಾಟವನ್ನು ಮೆಲುಕು ಹಾಕಿದರು.ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಗೌರಿಯಕ್ಕ ನಮಗೆಲ್ಲ ಒಂದು ಮಾದರಿ.ಅವರು ಹೇಳಿದ ಎಲ್ಲ ಮಾತುಗಳು ಇಂದು ಸತ್ಯವಾಗುತ್ತಿವೆ.

 

ಮನೆಯ ಹಿರಿಯಕ್ಕನನ್ನು ಕಳೆದುಕೊಂಡಿದ್ದೇವ ಎಂದು ಗೌರಿಯವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.ಇನ್ನು ಗೌರಿಯವರ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, ”ಗೌರಿ ಕುಟುಂಬ ಬೆಳೆಯುತ್ತಿದೆ. ಇಂದು ಅವಳು ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು. ವೈಯಕ್ತಿಕವಾಗಿ ಸಿದ್ದರಾಮಯ್ಯನವರೆಂದರೆ ಆಕೆಗೆ ಪ್ರೀತಿ.ಈ ವೇಳೆ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌, ರೈತ ನಾಯಕರಾದ ರಾಕೇಶ್ ಟಿಕಾಯತ್‌, ಬಲ್ವಿಂದರ್‌ ಸಿಂಗ್, ಗೌರಿಯವರ ತಾಯಿ ಇಂದಿರಾ ಲಂಕೇಶ್, ಗೌರಿ ಒಡನಾಡಿಗಳಾದ ಸಿರಿಮನೆ ನಾಗರಾಜ್, ಡಾ.ಎಚ್.ವಿ.ವಾಸು, ಕೆ.ಎಲ್.ಅಶೋಕ್, ವಿ.ಎಸ್.ಶ್ರೀಧರ್‌, ಶಿವಸುಂದರ್‌, ಮಲ್ಲಿಗೆ ಸಿರಿಮನೆ, ದು.ಸರಸ್ವತಿ, ದೀಪು ಮೊದಲಾದವರು ಹಾಜರಿದ್ದು ಗೌರಿ ನೆನಪುಗಳನ್ನು ಮೆಲುಕು ಹಾಕಿದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...