Breaking News

ಮಂಗಳೂರು ತೈಲದ ಮೇಲೆ ತೇಲುತ್ತಿದೆ : ಬಿ.ಎಂ ಫಾರೂಕ್ ಕಳವಳ

ಮಂಗಳೂರು:ಮಂಗಳೂರು ಸಮುದ್ರ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿರುವುದರಿಂದ ಭೂಮಿಯಡಿಯಲ್ಲಿ ನಿರ್ಮಾಣ ಮಾಡಿರುವ ಕಚ್ಛಾ ತೈಲ ಸಂಗ್ರಹಾಗಾರಗಳಿಂದ ಭವಿಷ್ಯದಲ್ಲಿ ಅಪಾಯ ಎದುರಾಗುವ ಸಾಧ್ಯತೆಗಳ ಬಗ್ಗೆ ಬಿ.ಎಂ ಫಾರೂಕ್ ಆತಂಕ ವ್ಯಕ್ತಪಡಿಸಿದ್ದಾರೆ.ಪರಿಸರ, ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿ ಬಾಕಿಯಿರುವ ಭರವಸೆಗಳ ಬಗ್ಗೆ ಜಿಲ್ಲೆಯಲ್ಲಿ ಪ್ರವಾಸ ಮತ್ತು ಅಧ್ಯಯನ ಮಾಡಿದ ಬಳಿಕ ಭರವಸೆಗಳ ಸಮಿತಿ ಮುಖ್ಯಸ್ಥರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸದ್ಯ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಕಚ್ಛಾ ತೈಲ ದಾಸ್ತಾನು ಮಾಡುವ ಎರಡು ಭೂಗತ ಸಂಗ್ರಹಾಗಾರಗಳಿವೆ.

 

ಎಚ್ ಪಿಸಿಎಲ್ ನವರು ಕಾಟಿಪಳ್ಳದ ಬಳಿಯ ಬಾಳ ಗ್ರಾಮದಲ್ಲಿ 500 ಅಡಿ ಭೂಮಿಯ ಆಳದಲ್ಲಿ LPG ಸಂಗ್ರಹಾಗಾರ ನಿರ್ಮಾಣ ಮಾಡುತ್ತಿದ್ದು ಅದರ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ನಿನ್ನೆ ಭರವಸೆಗಳ ಸಮಿತಿ ಭೂಮಿಯಡಿಯಲ್ಲಿರುವ LPG ಸಂಗ್ರಹಾಗಾರಕ್ಕೆ ಭೇಟಿ ನೀಡಿತ್ತು. ಭೂಕಂಪ ಹಾಗೂ ಇನ್ನಿತರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಈ ಸಂಗ್ರಹಾಗಾರಕ್ಕೆ ಅಪಾಯ ಇದೆಯಾ ಎಂದು ನಾವು ಕಂಪೆನಿಯವರ ಬಳಿ ಕೇಳಿದ್ದೇವೆ. ಅದಕ್ಕೆ ಅವರು ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ. 850 ಕೋಟಿ ರುಪಾಯಿ ವೆಚ್ಚದ ಈ ಯೋಜನೆಯ ಕಾಮಗಾರಿ ಒಂದು ವರ್ಷದಲ್ಲಿ ಮುಗಿಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ISPRL ಇಂತಹ ಎರಡ್ಮೂರು ಯೋಜನೆಗಳು ಮಂಗಳೂರಿನಲ್ಲಿ ಮಾಡುವ ಯೋಜನೆ ಮಾಡಿರುವುದು ತಿಳಿದುಬಂದಿದೆ ಎಂದು ಬಿ.ಎಂ ಫಾರೂಕ್ ಮಾಹಿತಿ ನೀಡಿದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...