Breaking News

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ರಣ್ ಬೀರ್ ಕಪೂರ್’ಗೆ ಇಡಿ ಸಮನ್ಸ್

ನವದೆಹಲಿ:ಮಹಾದೇವ್‌ ಆನ್‌ಲೈನ್ ಬೆಟ್ಟಿಂಗ್ ಆಪ್ ಒಂದರ ಪ್ರಕರಣ ಸಂಬಂಧ ಬಾಲಿವುಡ್ ಸ್ಟಾರ್ ನಟ ರಣ್ ಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿದೆ.ಬಾಲಿವುಡ್ ನಟರು, ಗಾಯಕರು ಮತ್ತು ಹಾಸ್ಯನಟರು ಸೇರಿದಂತೆ ಹಲವಾರು ಖ್ಯಾತ ಸೆಲೆಬ್ರಿಟಿಗಳಿಗೆ ಈ ಪ್ರಕರಣದಲ್ಲಿ ಸಮನ್ಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ 417 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.ಅದೇ ಪ್ರಕರಣದ ತನಿಖೆಯ ಭಾಗವಾಗಿ ನಟ ರಣ್ ಬೀರ್ ಕಪೂರ್ ಗೂ ನೊಟೀಸ್ ನೀಡಲಾಗಿದೆ. ಅಕ್ಟೋಬರ್ 6 ರ ಒಳಗಾಗಿ ಸಮನ್ಸ್ ಗೆ ಉತ್ತರಿಸುವಂತೆ ಸೂಚಿಸಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...