Breaking News

ಇರಾನ್‌ನ ನರ್ಗೆಸ್ ಮೊಹಮ್ಮದಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

ಇರಾನಿನಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ಉತ್ತೇಜಿಸಲು ಹೋರಾಟಗಳನ್ನು ಮಾಡಿದ ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗಿಸ್ ಮುಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಿದೆ.

ಇರಾನ್ ಸರಕಾರವು ಮುಹಮ್ಮದಿ ಅವರನ್ನು 13 ಸಲ ಬಂಧಿಸಿದ್ದು, ನ್ಯಾಯಾಲಯಗಳು ಐದು ಬಾರಿ ಅವರನ್ನು ದೋಷಿ ಎಂದು ಘೋಷಿಸಿ ಒಟ್ಟು 31 ವರ್ಷಗಳ ಜೈಲು ವಾಸ ಮತ್ತು 154 ಚಾಟಿಯೇಟಿನ ಶಿಕ್ಷೆ ವಿಧಿಸಿವೆ.ಮೊಹಮ್ಮದಿ 2003ರಲ್ಲಿ ಟೆಹ್ರಾನ್‌ನ ಮಾನವ ಹಕ್ಕುಗಳ ಕೇಂದ್ರದ ರಕ್ಷಕರೊಂದಿಗೆ ತೊಡಗಿಸಿಕೊಂಡರು. ಅವರು ಮಹಿಳೆಯರನ್ನು ಗುರಿಯಾಗಿಸುವ ತಾರತಮ್ಯ ಮತ್ತು ದಬ್ಬಾಳಿಕೆಯ ನೀತಿಗಳ ವಿರುದ್ಧ ಮಾಡಿದ್ಧ ಹೋರಾಟಕ್ಕೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತೀರ್ಪುಗಾರರು ಹೇಳಿದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...