Breaking News

ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನ

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿ 2,000 ಮಂದಿ ಮೃತಪಟ್ಟಿದ್ದರೆ.ಜಿಂದಾ ಜಾನ್‌ ಜಿಲ್ಲೆಯ ಸರ್ಬೋಲ್ಯಾಂಡ್ ಗ್ರಾಮದಲ್ಲಿ ಭೂಕಂಪದ ಕೇಂದ್ರಬಿಂದುವಾಗಿದೆ ಅಲ್ಲಿ ಹತ್ತಾರು ಮನೆಗಳು ನೆಲಸಮವಾಗಿದೆ.ನೆಲಸಮವಾದ ಹಳ್ಳಿಗಳ ಅವಶೇಷಗಳ ನಡುವೆ ಬದುಕುಳಿದವರ ರಕ್ಷಣೆಗೆ ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದೆ.

ಭೂಕಂಪನದ ಅನುಭವವನ್ನು ಹಂಚಿಕೊಂಡ   ಬಶೀರ್ ಅಹ್ಮದ್, ಮೊದಲ ಬಾರಿ ಸಂಭವಿಸಿದ ಭೂಮಿಯ ನಡುಕದಲ್ಲಿ ಎಲ್ಲಾ ಮನೆಗಳು ಕುಸಿದಿವೆ. ಮನೆಯೊಳಗಿದ್ದವರು ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಸಾವುನೋವುಗಳು ತುಂಬಾ ಹೆಚ್ಚಾಗಿದೆ ಎಂದು ಸರ್ಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಅವರು ಹೇಳಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...