Breaking News

ಗರ್ಬಾ ಆಚರಣೆ ವೇಳೆ 24 ಗಂಟೆಯಲ್ಲಿ 10 ಮಂದಿ ಹೃದಯಾಘಾತದಿಂದ ಸಾವು

ನವರಾತ್ರಿಯ ಭಾಗವಾಗಿ ಹಮ್ಮಿಕೊಂಡ ಗರ್ಬಾ ಕಾರ್ಯಕ್ರಮ ಆಚರಣೆ ವೇಳೆ ಕಳೆದ 24 ಗಂಟೆಯಲ್ಲಿ ಕನಿಷ್ಠ 10 ಮಂದಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ವಿಚಾರ ಬಯಲಾಗಿದೆ.ಅ.20 ಮತ್ತು ಅ.21 ರಂದು ರಾಜ್ಯದಲ್ಲಿ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆ.ಮೃತರಲ್ಲಿ ಬರೋಡಾದ ದಾಭೋಯ್‌ ನಿವಾಸಿ 13 ವರ್ಷದ ಬಾಲಕ ಕಿರಿಯವನಾಗಿದ್ದಾರೆ.

ಅ.20ರಂದು ಗಾರ್ಬಾ ಕಾರ್ಯಕ್ರಮದಲ್ಲಿ ಅಹಮದಾಬಾದ್‌ನ ನಿವಾಸಿ ಯುವಕ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಅದೇ ರೀತಿ ಕಪದ್ವಾಂಜ್‌ನ 17 ವರ್ಷದ ಬಾಲಕ ಗಾರ್ಬಾದಲ್ಲಿ ಭಾಗವಹಿಸಿದ್ದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ.ಗರ್ಬಾ ಕಾರ್ಯಕ್ರಮದ ಸ್ಥಳಗಳ ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ರೋಗಿಗಳು ಬಂದಾಗ ಚಿಕಿತ್ಸೆಗೆ ಸನ್ನದ್ದವಾಗಿರುವಂತೆ ರಾಜ್ಯ ಸರ್ಕಾರ ಸೂಚನೆಯನ್ನು ನೀಡಿದೆ.ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ತ್ವರಿತವಾಗಿ ತಲುಪುವಂತೆ ಕಾರಿಡಾರ್‌ಗಳನ್ನು ರಚಿಸುವಂತೆ ಗಾರ್ಬಾದ ಸಂಘಟಕರಿಗೆ ತಿಳಿಸಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...