Breaking News

ನ್ಯಾಯಾಲಯದ ತೀರ್ಪು ಶಾಸಕಾಂಗ ನೇರವಾಗಿ ರದ್ದುಪಡಿಸುವಂತಿಲ್ಲ: ಸಿಜೆಐ ಚಂದ್ರಚೂಡ್

ನ್ಯಾಯಾಲಯದ ತೀರ್ಪನ್ನು ಶಾಸಕಾಂಗ ನೇರವಾಗಿ ತಳ್ಳಿಹಾಕಲು ಅಥವಾ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಾಂಗದ ಆದೇಶದಲ್ಲಿನ ನ್ಯೂನತೆಯನ್ನು ಸರಿಪಡಿಸಲು ಶಾಸಕಾಂಗವು ಹೊಸ ಕಾನೂನನ್ನು ಜಾರಿಗೊಳಿಸುವ ಆಯ್ಕೆಯನ್ನು ಬಳಬಹುದು ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಹಮ್ಮಿಕೊಂಡಿದ್ದ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಡಿ ವೈ ಚಂದ್ರಚೂಡ್, ತಾವು ನೀಡಿದ ತೀರ್ಪಿನ ಬಗ್ಗೆ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ನ್ಯಾಯಮೂರ್ತಿಗಳು ಚಿಂತಿಸುವುದಿಲ್ಲ. ಇದು ಚುನಾಯಿತ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಇರುವ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ.ನ್ಯಾಯಾಲಯದ ತೀರ್ಪಿನ ವಿಚಾರ ಬಂದಾಗ ಶಾಸಕಾಂಗವು ಏನು ಮಾಡಬಹುದು ಮತ್ತು ಶಾಸಕಾಂಗವು ಏನು ಮಾಡಬಾರದು ಎಂಬುದರ ನಡುವೆ ವಿಭಜನಾ ರೇಖೆಯಿದೆ. ನ್ಯಾಯಾಲಯವು ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಗುರುತಿಸುವ ನ್ಯೂನತೆಯನ್ನು ಸರಿಪಡಿಸಲು ಮಾತ್ರ ಕಾನೂನು ರೂಪಿಸುವ ಅಧಿಕಾರ ಶಾಸಕಾಂಗಕ್ಕೆ ಇದೆ ಎಂದು ಹೇಳಿದ್ದಾರೆ.ತೀರ್ಪು ತಪ್ಪಾಗಿದೆ ಎಂದು ಸಮರ್ಥಿಸಿಕೊಂಡು ಅದನ್ನು ನೇರವಾಗಿ ರದ್ದುಪಡಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ. ಯಾವುದೇ ಪ್ರಕರಣ ಕುರಿತು ನಿರ್ಣಯ ಕೈಗೊಳ್ಳುವಾಗ ಸಂವಿಧಾನದ ನೀತಿ ನಿಯಮಗಳನ್ನಷ್ಟೇ ನ್ಯಾಯಮೂರ್ತಿಗಳು ಅನುಸರಿಸುತ್ತಾರೆ.

About gaitonlennon_rodrigues

Check Also

ಮೈ ಲಾರ್ಡ್’ ಎನ್ನುವುದನ್ನು ನಿಲ್ಲಿಸಿ, ನನ್ನ ಅರ್ಧ ಸಂಬಳ ನೀಡುತ್ತೇನೆ: ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಕೀಲರು ಪದೇ ಪದೇ “ಮೈ ಲಾರ್ಡ್” ಮತ್ತು “ಯುವರ್ ಲಾರ್ಡ್‌ಶಿಪ್ಸ್” ಎಂದು ಸಂಬೋಧಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು …

Leave a Reply

Your email address will not be published. Required fields are marked *

Translate »
error: Content is protected !!
Share to...