Breaking News

ಡಿ ಕೆ ಶಿವಕುಮಾರ್ ಹೆಸರಿನಲ್ಲಿ ಫಾಕ್ಸ್ ಕಾನ್‌‌ ಸಂಸ್ಥೆಗೆ ನಕಲಿ ಪತ್ರ: ಪ್ರಕರಣ ದಾಖಲು

ಆಪಲ್ ಏರ್‌ಪಾಡ್ಸ್ ಉತ್ಪಾದನಾ ಪಾಲುದಾರರಲ್ಲಿ ಒಂದಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಅಧ್ಯಕ್ಷರಿಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬರೆದಿದ್ದಾರೆ ಎನ್ನಲಾದ ನಕಲಿ ಪತ್ರವೊಂದು ವೈರಲ್‌ ಆಗಿದ್ದು, ಪತ್ರದಲ್ಲಿ ಆಪಲ್ ಏರ್‌ಪಾಡ್ಸ್ ಉತ್ಪಾದನಾ ಘಟಕವನ್ನು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಆಗ್ರಹಿಸಲಾಗಿದೆ.ಪತ್ರ ವೈರಲ್ ಆದ ಕೂಡಲೇ ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಪಕ್ಷವು ಎಕ್ಸ್‌ನಲ್ಲಿ ಕರ್ನಾಟಕ ಸರ್ಕಾರ ಹೈದರಾಬಾದ್ ವಿರುದ್ಧ ದೊಡ್ಡ ಪಿತೂರಿ ಮಾಡಿದೆ ಎಂದು ಆರೋಪಿಸಿದೆ.

ಆದರೆ ಈ ಆರೋಪವನ್ನು ಡಿಕೆ ಶಿವಕುಮಾರ್ ಅವರು ನಿರಾಕರಿಸಿದ್ದರು.ಈ ಬಗ್ಗೆ ಡಿಸಿಎಂ ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಎಂಎನ್ ಅವರು ಶನಿವಾರ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ರದ ಮೇಲಿನ ಸಹಿ ನಕಲಿಯಾಗಿದ್ದು, ಬರೆದಿರುವ ಲೆಟರ್ ಹೆಡ್ ಕೂಡ ನಕಲಿ ಎಂದು ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.ಈ ಕುರಿತು ಕುಮಾರಕೃಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಪತ್ರ ನಕಲಿಯಾಗಿದೆ ಎಂದು ಹೇಳಿದ್ದಾರೆ. ನನ್ನ ಲೆಟರ್ ಹೆಡ್ ವಿನ್ಯಾಸ, ಬಣ್ಣ ಬೇರೆ ಇದೆ. ನನ್ನ ಲೆಟರ್ ಹೆಡ್ ಪ್ರತಿ ಪುಟಕ್ಕೆ ಸಂಖ್ಯೆಗಳಿರುತ್ತವೆ. ನನ್ನ ಲೆಟರ್ ಹೆಡ್ ಹಸಿರು ಬಣ್ಣದಲ್ಲಿ ಇಲ್ಲ. 15 ವರ್ಷಗಳ ಹಿಂದೆ ಶಾಸಕರುಗಳು ಹಸಿರು ಬಣ್ಣದ ಲೆಟರ್ ಹೆಡ್ ಬಳಸುತ್ತಿದ್ದರು. ಈಗ ಆ ಬಣ್ಣದ ಲೆಟರ್ ಹೆಡ್‌ನ್ನು ಯಾರೂ ಬಳಸುವುದಿಲ್ಲ ಎಂದು ಹೇಳಿದ್ದಾರೆ.

About gaitonlennon_rodrigues

Check Also

ಮೈ ಲಾರ್ಡ್’ ಎನ್ನುವುದನ್ನು ನಿಲ್ಲಿಸಿ, ನನ್ನ ಅರ್ಧ ಸಂಬಳ ನೀಡುತ್ತೇನೆ: ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಕೀಲರು ಪದೇ ಪದೇ “ಮೈ ಲಾರ್ಡ್” ಮತ್ತು “ಯುವರ್ ಲಾರ್ಡ್‌ಶಿಪ್ಸ್” ಎಂದು ಸಂಬೋಧಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು …

Leave a Reply

Your email address will not be published. Required fields are marked *

Translate »
error: Content is protected !!
Share to...