Breaking News

ವಿದೇಶಿ ಸುದ್ದಿ

Et ullamcorper sollicitudin elit odio consequat mauris, wisi velit tortor semper vel feugiat dui, ultricies lacus. Congue mattis luctus, quam orci mi semper

ಮೂವರು ವಿಜ್ಞಾನಿಗಳಿಗೆ 2023ರ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ

ಸ್ವೀಡನ್ : ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಭೌತಶಾಸ್ತ್ರದ ಪ್ರಶಸ್ತಿ ಘೋಷಿಸಿದ್ದು ಅಮೆರಿಕದ ಪೆರ್ರಿ ಅಗೋಸ್ಟಿನಿ, ಜರ್ಮನಿಯ ಫೆರೆಂಕ್ ಕ್ರೌಸ್ ಮತ್ತು ಸ್ವೀಡನ್ ನ ಅನ್ನೆ ಎಲ್.ಹ್ಯೂಲಿಯರ್ ಅವರನ್ನು 2023ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ . ಪೆರ್ರಿ ಅಗೋಸ್ಟಿನಿ ಅಮೆರಿಕದ ಕೊಲಂಬಸ್ ನ ದಿ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದರೆ, ಫೆರೆಂಕ್ ಕ್ರೌಸ್ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ ಸ್ಟಿಟ್ಯೂಟ್ ಆಫ್ ಕ್ವಾಂಟಮ್ ಆಪ್ಟಿಕ್ಸ್ …

Read More »

ದುಬೈನಲ್ಲಿ 45 ಕೋಟಿ ರು. ಮೊತ್ತದ ಬಂಪರ್‌ ಲಾಟರಿ ಗೆದ್ದ ಭಾರತೀಯ ಸಚಿನ್‌

ದುಬೈ: ಯುಎಇನಲ್ಲಿರುವ ಮುಂಬೈ ಮೂಲದ ಸಚಿನ್‌ (47) ಎಂಬುವವರು ಸ್ಥಳೀಯವಾಗಿ ಆಯೋಜಿಸುವ ಲಾಟರಿಯಲ್ಲಿ ಭರ್ಜರಿ 45 ಕೋಟಿ ರು. ಬಹುಮಾನ ಗೆದ್ದಿದ್ದಾರೆ. 25 ವರ್ಷದಿಂದ ದುಬೈನಲ್ಲಿ ನೆಲೆಸಿರುವ ಸಚಿನ್‌ ಸಿಎಡಿ ತಂತ್ರಜ್ಞರಾಗಿದ್ದು ಶನಿವಾರ 139ನೇ ಮಾಜೂಜ್‌ ಡ್ರಾ ಬಹುಮಾನ ಗೆದ್ದಿದ್ದಾರೆ. ‘ಪ್ರತಿ ವಾರ ಮಜೂಜ್‌ನಲ್ಲಿ ಭಾಗವಹಿಸುತ್ತಿದ್ದೆ. ಒಂದು ದಿನ ಗೆಲುವಿನ ನಿರೀಕ್ಷೆ ಇತ್ತು. ಈ ಗೆಲುವು ನನ್ನ ಕುಟುಂಬ ಮತ್ತು ಜೀವನವನ್ನು ಬದಲಾಯಿಸುತ್ತದೆ’ ಎಂದು ಸಚಿನ್‌ ಹೇಳಿದ್ದಾರೆ. ಮುಂಬೈ ಮೂಲದ …

Read More »

ಹೆಲಿಕಾಪ್ಟರ್‌ ಪತನ : ಪೈಲಟ್‌ ಸೇರಿದಂತೆ ಐವರ ದುರ್ಮರಣ..!

ನೇಪಾಳ:  ಆರು ಜನರೊಂದಿಗೆ ನೇಪಾಳದ ಮೌಂಟ್ ಎವರೆಸ್ಟ್ ಬಳಿ ನಾಪತ್ತೆಯಾಗಿದ್ದ ಮನಂಗ್ ಎ‌ ಹೆಲಿಕಾಪ್ಟರ್ ಜು. 11 ರಂದು ಸೋಲುಖುಂಬು ಜಿಲ್ಲೆಯ ಲಿಖುಪಿಕೆಯ ಲಾಯ್ಡುರಾದಲ್ಲಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ವಿದೇಶಿ ಪ್ರಜೆಗಳು ಮೆಕ್ಸಿಕನ್ನರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಗ್ರಾಮಸ್ಥರು ಐದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಕೋಶಿ ಪ್ರಾಂತ್ಯದ ಪೊಲೀಸ್‌ ಡಿಐಜಿ ರಾಜೇಶನಾಥ ಬಸ್ರೋಲಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಹೆಲಿಕಾಪ್ಟರ್ ಬೆಟ್ಟದ ಮೇಲಿರುವ …

Read More »

ಚೀನಾದಲ್ಲಿ ಮಳೆರಾಯನ ಅರ್ಭಟಕ್ಕೆ ನಾಲ್ವರು ನಾಪತ್ತೆ, 15 ಮಂದಿ ಸಾವು

ಬೀಜಿಂಗ್: ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಧಾರಾಕಾರ ಮಳೆಯ ಪರಿಣಾಮ ೧೫ ಜನ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ. ಸೋಮವಾರ ಬೆಳಗ್ಗೆ 7 ಗಂಟೆಯಿ0ದ ನೈರುತ್ಯ ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಗೆ ೧೫ ಜನ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎಲ್ಲಾ ಹಂತಗಳ ಅಧಿಕಾರಿಗಳು ಜನರ ಸುರಕ್ಷತೆ ಮತ್ತು ಆಸ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆದೇಶ ನೀಡಿದ್ದಾರೆ. ಅಲ್ಲದೇ …

Read More »

ಭೀಕರ ಕಾರು ಅಪಘಾತ : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಗೆ ಗಾಯ

ಮೀರತ್ : ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ಕಾರು ಅಪಘಾತದ ಬಳಿಕ ಮತ್ತೊಬ್ಬ ಟೀಂ ಇಂಡಿಯಾದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಅವರ ಕಾರು ಅಪಘಾತವಾಗಿದೆ. ಮಂಗಳವಾರ ರಾತ್ರಿ ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕೂಡ ಮೀರತ್ ನಲ್ಲಿ ಅಪಘಾತಕ್ಕೀಡಾಗಿದ್ದರು. ಮೀರತ್ನ ಕಮಿಷನರ್ ನಿವಾಸದ ಬಳಿ ವೇಗವಾಗಿ ಬಂದ ಕ್ಯಾಂಟರ್ ಮಾಜಿ ವೇಗಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ …

Read More »

ಸುಧಾರಿತ ಬ್ಯಾಟರಿಯೊಂದಿಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ತರಲಿದೆ ಟೊಯೊಟಾ

ಲಂಡನ್ : ತೂಕ, ಗಾತ್ರ ಮತ್ತು ಬ್ಯಾಟರಿಗಳ ವೆಚ್ಚವನ್ನು ಅರ್ಧದಷ್ಟು ಕಡಿಮೆ ಮಾಡಲು ತಾನು ತಾಂತ್ರಿಕ ಪ್ರಗತಿಯನ್ನು ಸಾಧಿಸಿರುವುದಾಗಿ ಟೊಯೊಟಾ ಹೇಳಿದೆ. ಇದು ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಭಾರಿ ಪ್ರಗತಿಯನ್ನು ಸೂಚಿಸುತ್ತದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. 2025 ರ ವೇಳೆಗೆ ದ್ರವ ಆಧಾರಿತ ಬ್ಯಾಟರಿಗಳಿಗೆ ಹೋಲಿಸಿದರೆ ಹೆಚ್ಚು ಪ್ರಯೋಜನಗಳನ್ನು ನೀಡುವ ಸುಧಾರಿತ ಘನ-ಸ್ಥಿತಿಯ ಬ್ಯಾಟರಿಗಳೊಂದಿಗೆ ಕಾರುಗಳನ್ನು ಹೊರತರುವ ಯೋಜನೆಯನ್ನು ವಿಶ್ವದ ಎರಡನೇ ಅತಿದೊಡ್ಡ ಕಾರು ತಯಾರಕರು ಈಗಾಗಲೇ ಅನುಸರಿಸುತ್ತಿದ್ದಾರೆ …

Read More »

ಟರ್ಕಿ ಅಧ್ಯಕ್ಷರಾಗಿ ಮತ್ತೆ ಎರ್ಡೋಗನ್‌ ಆಯ್ಕೆ

ಅಂಕಾರ: ಮತ್ತೊಂದು ಅವಧಿಗೆ ಟರ್ಕಿ ಅಧ್ಯಕ್ಷರಾಗಿ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಅವರು ಗೆಲವು ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.  ಹಣದುಬ್ಬರ, ಭೂಕಂಪದ ಸಂದರ್ಭಗಳನ್ನು ನಿಭಾಯಿಸಿ ಎರ್ಡೋಗನ್‌ ಮತ್ತೆ ಅಧಿಕಾರ ಪಡೆದಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ ಕೆಮಾಲ್‌ ಕಿಲಿಕ್‌ಡರೊಗ್ಲು ಸೋತಿದ್ದಾರೆ.

Read More »

ತಮಿಳುನಾಡಿನ 6 ಕಡೆ ಎನ್‌ಐಎ ದಾಳಿ 5 ಪಿಎಫ್‌ಐ ಕಾರ್ಯಕರ್ತರ ಸೆರೆ

ನವದೆಹಲಿ: ಮಂಗಳವಾರ ನಿಷೇಧಿತ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆಯ ಕಾರ್ಯಕರ್ತರ ಆಸ್ತಿಪಾಸ್ತಿಗಳ ಮೇಲೆ ತಮಿಳುನಾಡಿನ 6 ಕಡೆ ದಾಳಿ ಮಾಡಿರುವ ರಾಷ್ಟ್ರೀಯ ತನಿಖಾ ದಳವು (NIA), ಐವರನ್ನು ಬಂಧಿಸಿದೆ. ಇವರಿಂದ ಅಪಾರ ಶಸ್ತ್ರಾಸ್ತ್ರ, ದಾಖಲೆ ವಶಪಡಿಸಿಕೊಳ್ಳಲಾಗಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ದಾಳಿಯನ್ನು ಚೆನ್ನೈ (Chennai), ಮಧುರೈ (Madhurai), ಥೇಣಿ (Theni) ಹಾಗೂ ದಿಂಡಿಗಲ್‌ನಲ್ಲಿ (Dindigal) ನಡೆಸಲಾಗಿದೆ. ಪಿಎಫ್‌ಐನ (PFI) ಮದುರೈ …

Read More »

ಅಮೇರಿಕಾ: ಟೆಕ್ಸಾಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತೆಲಂಗಾಣದ ಜಡ್ಜ್ ಪುತ್ರಿ ಮೃತ್ಯು

ಅಮೇರಿಕಾ: ಅಮೇರಿಕಾದ ಟೆಕ್ಸಾಸ್ ನಗರದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ತೆಲಂಗಾಣ ಮೂಲದ ಯುವತಿ ಐಶ್ವರ್ಯಾ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನರಸಿರೆಡ್ಡಿ ಪುತ್ರಿ ಐಶ್ವರ್ಯಾ((27) ಶೂಟೌಟ್‌‌ನಲ್ಲಿ ಮೃತಪಟ್ಟಿದ್ದು, ಹೈದರಾಬಾದ್ ನ ಸರೂರು ನಗರದ ದಾಟಿಕೊಂಡ ನಿವಾಸಿಯಾಗಿರುವ ಮೃತ ಐಶ್ವರ್ಯಾ ಟೆಕ್ಸಾಸ್ ನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಇನ್ನು ಭಾನುವಾರ ಟೆಕ್ಸಾಸ್ ನಲ್ಲಿ ನಡೆದ ಶೂಟೌಟ್ ನಲ್ಲಿ ಎಂಟು ಜನರು ಮೃತಪಟ್ಟಿದ್ದರು. ಐಶ್ವರ್ಯ ಅವರು ಅಮೇರಿಕಾದಲ್ಲಿ ಪರ್ಫೆಕ್ಟ್ ಜನರಲ್ …

Read More »

ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ -ಇಬ್ಬರು ನಕ್ಸಲೀಯರ ಹತ್ಯೆ

ಛತ್ತೀಸ್‌ಗಢ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಭೇಜಿ ಪ್ರದೇಶದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಯೋಧರು ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಕುರಿತು ಮಾಹಿತಿ ನೀಡಿರುವ ಸುಕ್ಮಾ ಪೊಲೀಸರು, ‘ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ ಅವರೇ ಸಂಪೂರ್ಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದರು. ಇನ್ನು ಮೇ 1 …

Read More »
Translate »
error: Content is protected !!