Breaking News

Tag Archives: international news

ಇಸ್ರೇಲ್ ಹಿಂಸಾಚಾರ: ಗಾಜಾ ಪಟ್ಟಿಯಲ್ಲಿ ಮತ್ತೆ ಇಂಟರ್ನೆಟ್ ಫೋನ್ ನೆಟ್‌ವರ್ಕ್‌ ಸ್ಥಗಿತ

ಬುಧವಾರ ಗಾಜಾ ಪಟ್ಟಿಯಾದ್ಯಂತ ಇಂಟರ್ನೆಟ್ ಮತ್ತು ಫೋನ್ ನೆಟ್‌ವರ್ಕ್‌ಗಳು ಸ್ಥಗಿತಗೊಂಡಿವೆ ಎಂದು ಪ್ಯಾಲೇಸ್ಟಿನಿಯನ್ ದೂರಸಂಪರ್ಕ ಸಂಸ್ಥೆ ತಿಳಿಸಿದೆ.ಈ ಬಗ್ಗೆ ಪ್ಯಾಲೆಸ್ತೀನ್ ಟೆಲಿಕಮ್ಯುನಿಕೇಶನ್ಸ್ ಕಂಪನಿಯು ಎಕ್ಸಾನಲ್ಲಿ ಪೋಸ್ಟ್ ಮಾಡಿದ್ದು, ”ಪ್ರೀತಿಯ ದೇಶವಾಸಿಗಳೇ, ಗಾಜಾದಲ್ಲಿ ಫೋನ್ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ ಎಂದು ಘೋಷಿಸಲು ನಾವು ವಿಷಾದಿಸುತ್ತೇವೆ” ಎಂದು ಹೇಳಿದೆ.ಇದು ದೇಶದ ನಿವಾಸಿಗಳಿಗೆ ನಷ್ಟವನ್ನು ಉಂಟು ಮಾಡಲಿದೆ. ಗ್ಲೋಬಲ್ ನೆಟ್‌ವರ್ಕ್ ಮಾನಿಟರ್ ನೆಟ್‌ಬ್ಲಾಕ್‌ಗಳು ಗಾಜಾ ಹೊಸ ಇಂಟರ್ನೆಟ್ ಬ್ಲ್ಯಾಕೌಟ್‌ನ ಮಧ್ಯೆ …

Read More »

ವಿಧಾನಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿ ನಾಯಕನಿಗೆ ಹೃದಯಾಘಾತ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಟಿಕೆಟ್ ನಿರಾಕರಿಸಿದ ಸುದ್ದಿ ತಿಳಿದ ನಂತರ ಹಿರಿಯ ಬಿಜೆಪಿ ನಾಯಕ, ಮಾಜಿ ಗೃಹ ಸಚಿವ ಉಮಾಶಂಕರ್ ಗುಪ್ತಾ (71) ಹೃದಯಾಘಾತ ವಾಗಿದ್ದು, ಅವರನ್ನು ಸೋಮವಾರ ಮಧ್ಯಾಹ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗುಪ್ತಾ ಅವರ ಆರೋಗ್ಯ ವಿಚಾರಿಸಿದ್ದಾರೆ. ಮಾಜಿ ಗೃಹ ಸಚಿವ ಭೋಪಾಲ್‌ನ ಮಾಜಿ ಮೇಯರ್ ಹಾಗೂ ನೈರುತ್ಯ ಭೋಪಾಲ್ ವಿಧಾನಸಭಾ ಕ್ಷೇತ್ರದಿಂದ ಮೂರು …

Read More »

ಪ್ಯಾಲೆಸ್ತೀನ್‌ಗೆ 3 ಲಕ್ಷ ಡಾಲರ್ ಘೋಷಿಸಿದ ಮಲಾಲಾ ಯೂಸುಫ್‌

ಗಾಝಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇಸ್ರೇಲ್‌- ಪ್ಯಾಲೆಸ್ತೀನ್‌ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ ಗಾಝಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲಿನ ಬಾಂಬ್ ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.ಅವರು ಸಂತ್ರಸ್ತ ಪ್ಯಾಲೆಸ್ತೀನ್‌ಗೆ 2.5 ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.ವಿಡಿಯೊ ಮೂಲಕ ಹೇಳಿಕೆ ನೀಡಿರುವ ಮಲಾಲಾ ಯೂಸುಫ್‌, ಕದನಕ್ಕೆ ವಿರಾಮ ಹಾಕಿ ಗಾಜಾದಲ್ಲಿರುವವರಿಗೆ …

Read More »

ಗಾಝಾ ಪಟ್ಟಿಯಾದ್ಯಂತ ನೀರಿನ ಕೊರತೆ ಅಪಾಯದಲ್ಲಿ 2 ಮಿಲಿಯನ್‌ ಜನರು: UNRWA

ಗಾಝಾ ಪಟ್ಟಿಯಾದ್ಯಂತ ನೀರಿನ ಕೊರತೆಯಾಗಿದ್ದು 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಪಾಯದಲ್ಲಿದ್ದಾರೆ. ಇದು ಬದುಕು ಮತ್ತು ಸಾವಿನ ವಿಷಯವಾಗಿದೆ. 2 ಮಿಲಿಯನ್ ಜನರಿಗೆ ನೀರು ಲಭ್ಯವಾಗುವಂತೆ ಮಾಡಲು ಇಂಧನವನ್ನು ಈಗ ಗಾಝಾಕ್ಕೆ ತಲುಪಿಸಬೇಕಾಗಿದೆ ಎಂದು ಯುಎನ್‌ಆರ್‌ಡ್ಬ್ಲೂಎ (UNRWA) ಕಮಿಷನರ್-ಜನರಲ್ ಫಿಲಿಪ್ ಲಾಝಾರಿನಿ ಹೇಳಿದರು.ಒಂದು ವಾರದಿಂದ ಗಾಝಾಕ್ಕೆ ಯಾವುದೇ ಮಾನವೀಯ ನೆಲೆಯ ಸಹಕಾರಕ್ಕೆ ಅನುಮತಿಸಲಾಗಿಲ್ಲ. ಸಾರ್ವಜನಿಕ ನೀರಿನ ಜಾಲಗಳು ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ, ಗಾಝಾ ಪಟ್ಟಿಯಲ್ಲಿ ಶುದ್ಧ ನೀರು ಖಾಲಿಯಾಗುತ್ತಿದೆ. …

Read More »

ಕ್ಲಾಡಿಯಾ ಗೋಲ್ಡಿನ್​​ಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞೆ ಕ್ಲಾಡಿಯಾ ಗೋಲ್ಡಿನ್ ಅವರಿಗೆ 2023ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ನೀಡಲಾಗುತ್ತದೆ. ಅರ್ಥಶಾಸ್ತ್ರದಲ್ಲಿ ತಮ್ಮದೇ  ಸಾಧನೆಗಾಗಿ ಮತ್ತು ಆರ್ಥಿಕ ಕ್ಷೇತ್ರದ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಹಿಳಾ ಕಾರ್ಮಿಕ ಮಾರುಕಟ್ಟೆ ಫಲಿತಾಂಶಗಳ ಕುರಿತಂತೆ ನಮ್ಮ ಜ್ಞಾನವನ್ನು ಹೆಚ್ಚಿಸಿದ್ದಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ …

Read More »

ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನ

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿ 2,000 ಮಂದಿ ಮೃತಪಟ್ಟಿದ್ದರೆ.ಜಿಂದಾ ಜಾನ್‌ ಜಿಲ್ಲೆಯ ಸರ್ಬೋಲ್ಯಾಂಡ್ ಗ್ರಾಮದಲ್ಲಿ ಭೂಕಂಪದ ಕೇಂದ್ರಬಿಂದುವಾಗಿದೆ ಅಲ್ಲಿ ಹತ್ತಾರು ಮನೆಗಳು ನೆಲಸಮವಾಗಿದೆ.ನೆಲಸಮವಾದ ಹಳ್ಳಿಗಳ ಅವಶೇಷಗಳ ನಡುವೆ ಬದುಕುಳಿದವರ ರಕ್ಷಣೆಗೆ ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದೆ. ಭೂಕಂಪನದ ಅನುಭವವನ್ನು ಹಂಚಿಕೊಂಡ   ಬಶೀರ್ ಅಹ್ಮದ್, ಮೊದಲ ಬಾರಿ ಸಂಭವಿಸಿದ ಭೂಮಿಯ ನಡುಕದಲ್ಲಿ ಎಲ್ಲಾ ಮನೆಗಳು ಕುಸಿದಿವೆ. ಮನೆಯೊಳಗಿದ್ದವರು ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಸಾವುನೋವುಗಳು ತುಂಬಾ ಹೆಚ್ಚಾಗಿದೆ …

Read More »

ಇರಾನ್‌ನ ನರ್ಗೆಸ್ ಮೊಹಮ್ಮದಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

ಇರಾನಿನಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ಉತ್ತೇಜಿಸಲು ಹೋರಾಟಗಳನ್ನು ಮಾಡಿದ ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗಿಸ್ ಮುಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಿದೆ. ಇರಾನ್ ಸರಕಾರವು ಮುಹಮ್ಮದಿ ಅವರನ್ನು 13 ಸಲ ಬಂಧಿಸಿದ್ದು, ನ್ಯಾಯಾಲಯಗಳು ಐದು ಬಾರಿ ಅವರನ್ನು ದೋಷಿ ಎಂದು ಘೋಷಿಸಿ ಒಟ್ಟು 31 ವರ್ಷಗಳ ಜೈಲು ವಾಸ ಮತ್ತು 154 ಚಾಟಿಯೇಟಿನ ಶಿಕ್ಷೆ ವಿಧಿಸಿವೆ.ಮೊಹಮ್ಮದಿ …

Read More »

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಮೊದಲ ದಲಿತ ಮಹಿಳೆ ಬೀನಾ ಜಾನ್ಸನ್

ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನದ (ಎನ್‌ಸಿಡಿಎಚ್‌ಆರ್) ಪ್ರಧಾನ ಕಾರ್ಯದರ್ಶಿ ಬೀನಾ ಜಾನ್ಸನ್ ಅವರು ಸೆ. 18 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಮೊದಲ ದಲಿತ ಮಹಿಳೆಯಾಗಿದ್ದಾರೆ.ಬಡತನವನ್ನು ನಿರ್ಮೂಲನೆ ಮಾಡಬೇಕಾದರೆ ತಾರತಮ್ಯರಹಿತ ತತ್ವಗಳನ್ನುಎತ್ತಿಹಿಡಿಯಬೇಕು ಎಂದು ಅವರು ಹೇಳಿದರು.ಮಹಿಳೆಯರು ಮತ್ತು ಟ್ರಾನ್ಸ್ಜೆಂಡರ್ ಸಮುದಾಯಗಳನ್ನು ಬೆಂಬಲಿಸಲು ನಿರ್ದಿಷ್ಟ ಕಾರ್ಯವಿಧಾನಗಳ ಅವಶ್ಯಕತೆಯಿದೆ ಎಂದು ಬೀನಾ ಹೇಳಿದರು. ನಾನು ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ದಲಿತರು, ಹರತಿನ್, ರೋಮಾ, ಕಿಲ್ಲಾಂಬೋಲ ಮತ್ತು ಸಾಮಾಜಿಕವಾಗಿ …

Read More »

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ವಾಷಿಂಗ್ಟನ್: 2020ರ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ, ಅಕ್ರಮ ಆರೋಪ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಿ ಬಳಿಕ ಕೆಲವೇ ಹೊತ್ತಿನಲ್ಲಿ ಶ್ಯೂರಿಟಿ ಮೇಲೆ ಬಿಡುಗಡೆ ಮಾಡಲಾಗಿದೆ.ಅಧಿಕಾರ ದುರ್ಬಳಕೆ ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು. 200,000 ಡಾಲರ್ ಮೌಲ್ಯದ​​ ಬಾಂಡ್​​​ ಶ್ಯೂರಿಟಿ ನೀಡಿದ ಬಳಿಕ ಜಾಮೀನಿನ ಮೇಲೆ ಡೊನಾಲ್ಡ್ ಟ್ರಂಪ್​​​​ ಅವರನ್ನು ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 2020ರ ಜಾರ್ಜಿಯಾ …

Read More »
Translate »
error: Content is protected !!