Breaking News

Tag Archives: karavali

ಮಂಗಳೂರು ಮುಸ್ಲಿಮ್ ವಕೀಲೆಗೆ ಮಾನಸಿಕ ಕಿರುಕುಳ ಬಸ್ ಚಾಲಕ, ಕಂಡೆಕ್ಟರ್ ಬಂಧನ

ಮಂಗಳೂರು:ವೃತ್ತಿಯಲ್ಲಿ ವಕೀಲೆಯಾಗಿರುವ ಮಹಿಳೆಯೊಬ್ಬರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್ ನಿಂದ ಸ್ಟೆಟ್ ಬ್ಯಾಂಕ್ ಗೆ ತೆರಳುವ ರೂಟ್ ನಂಬರ್ 19, ಆಶೆಲ್ ಬಸ್ ನ್ನು ಹತ್ತಲು ಹೋಗಿದ್ದಾರೆ.ಈ ವೇಳೆ ಬಸ್ ಚಾಲಕ  ಎಕಾಏಕಿ ಬಸ್ ನ್ನು ಚಲಾಯಿಸಿದ್ದು, ಮಹಿಳೆ ರಸ್ತೆಗೆ ಬೀಳುವ ವೇಳೆ ಬಸ್ ನ ನಿರ್ವಾಹಕ ಮಹಿಳೆಯ ಕೈಯನ್ನು ಹಿಡಿದು ಎಳೆದು ಸಾರ್ವಜನಿಕರ ಮುಂದೆ ನೀವು ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ, ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು ಇಲ್ಲದಿದ್ದರೆ …

Read More »

ನಿಷೇಧಿತ ಎಂಡಿಎಂಎ ವಸ್ತು ಮಾರಾಟ ಇಬ್ಬರ ಆರೋಪಿಗಳ ಬಂಧನ

ಮಂಗಳೂರು:ತಲಪಾಡಿ ತಚ್ಚಾಣಿ ಬಳಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳದ ತ್ರಿಶ್ಶೂರ್‌ನ ವಡಕಂಚೇರಿ ಗ್ರಾಮದ ಶೇಕ್‌ ತನ್ವೀರ್‌ (20) ಮತ್ತು ಕೋಯಿಕ್ಕೋಡ್‌ ಅಂಜೇರಿ ವಡಗೆರೆ ನಿವಾಸಿ ಸಾಯಿಕೃಷ್ಣ (19) ಎಂಬ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಪಿಎಸ್‌ಐ ಧನರಾಜ್‌ ನೇತೃತ್ವದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಎಂಡಿಎಂಎ ಸಾಗಾಟಕ್ಕೆ ಬಳಸಿದ್ದ ಬೈಕ್‌ ಮತ್ತು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Read More »

ಮಂಗಳೂರಿನಲ್ಲಿ ಐಟಿ ಪಾರ್ಕ್‌ ಸ್ಥಾಪನೆ : ದಿನೇಶ್‌ ಗುಂಡೂರಾವ್‌

ಮಂಗಳೂರು: ಮಂಗಳೂರಿನ ದೇರೆಬೈಲ್‌ನಲ್ಲಿ ಐಟಿ ಪಾರ್ಕ್‌ ಸ್ಥಾಪನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನ (KEONICS) ಮೂರು ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಈ ಯೋಜನೆಯನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಸ್ಥಾಪಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಗೆ ಪ್ರಸ್ತಾವನೆ …

Read More »

ಮಂಗಳೂರು ಪೊಲೀಸ್‌ ಠಾಣೆಯಲ್ಲಿ ಯುವತಿಯ ಆಕ್ರಮಣಕಾರಿ ವರ್ತನೆ

ಮಂಗಳೂರು: ನಗರದ ಪೊಲೀಸ್‌ ಠಾಣೆಯಲ್ಲಿ ಯುವತಿಯೋರ್ವಳು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ದ್ರವ್ಯ ವ್ಯಸನಿ ಎಂಬ ಶೀರ್ಷಿಕೆಯಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು, ಸೆ.1ರಂದು ಪಂಪ್‌ವೆಲ್‌ನಲ್ಲಿರುವ ಮೆಡಿಕಲ್‌ನಲ್ಲಿ ಓರ್ವ ಯುವತಿ ಆಕ್ರಮಣಕಾರಿ ರೀತಿಯಲ್ಲಿ ವರ್ತನೆ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಆಕೆ ಮಾದಕ ದ್ರವ್ಯ ಸೇವನೆ ಮಾಡಿರಬೇಕೆಂಬ ಸಂದೇಹದಿಂದ ವೈದ್ಯಕೀಯ ತಪಾಸಣೆಗೆ …

Read More »

ಮಂಗಳೂರು ತೈಲದ ಮೇಲೆ ತೇಲುತ್ತಿದೆ : ಬಿ.ಎಂ ಫಾರೂಕ್ ಕಳವಳ

ಮಂಗಳೂರು:ಮಂಗಳೂರು ಸಮುದ್ರ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿರುವುದರಿಂದ ಭೂಮಿಯಡಿಯಲ್ಲಿ ನಿರ್ಮಾಣ ಮಾಡಿರುವ ಕಚ್ಛಾ ತೈಲ ಸಂಗ್ರಹಾಗಾರಗಳಿಂದ ಭವಿಷ್ಯದಲ್ಲಿ ಅಪಾಯ ಎದುರಾಗುವ ಸಾಧ್ಯತೆಗಳ ಬಗ್ಗೆ ಬಿ.ಎಂ ಫಾರೂಕ್ ಆತಂಕ ವ್ಯಕ್ತಪಡಿಸಿದ್ದಾರೆ.ಪರಿಸರ, ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿ ಬಾಕಿಯಿರುವ ಭರವಸೆಗಳ ಬಗ್ಗೆ ಜಿಲ್ಲೆಯಲ್ಲಿ ಪ್ರವಾಸ ಮತ್ತು ಅಧ್ಯಯನ ಮಾಡಿದ ಬಳಿಕ ಭರವಸೆಗಳ ಸಮಿತಿ ಮುಖ್ಯಸ್ಥರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸದ್ಯ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಕಚ್ಛಾ ತೈಲ ದಾಸ್ತಾನು ಮಾಡುವ …

Read More »

ಅಪಘಾತದಿಂದ ಗಾಯಗೊಂಡಿದ್ದ ವಿದ್ಯಾರ್ಥಿಗೆ ನೆರವಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಚ್ಚಿಲ ಪಣಿಯೂರಿನ ಬೆಳಪು ವ್ಯವಸಾಯ ಸಹಕಾರ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಾಗೂ ಸಹಕಾರಿ ಮಹಲ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಉಡುಪಿ ಕಡೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ರಸ್ತೆಯಲ್ಲೆ ಬಿದ್ದು ನರಳುತ್ತಿದ್ದನು. ವಿದ್ಯಾರ್ಥಿಯ ನರಳಾಟವನ್ನು ಕಂಡ ಸಚಿವೆ ಹೆಬ್ಬಾಳ್ಕರ್ ಮತ್ತು ಮಿಥುನ್ ರೈ ತಕ್ಷಣವೇ ಕಾರನ್ನು …

Read More »

ಸ್ನೇಹಿತರ ಜೊತೆ ಸ್ನಾನಕ್ಕೆಂದು ಕೊಳಕ್ಕೆ ಇಳಿದಿದ್ದ ವ್ಯಕ್ತಿ ಮೃತ್ಯು

ಮಂಗಳೂರು: ಸ್ನೇಹಿತರ ಜೊತೆ ಸ್ನಾನಕ್ಕೆಂದು ಖಾಸಗಿ ಕೊಳಕ್ಕೆ ಇಳಿದಿದ್ದ ಕೇರಳ ಮೂಲದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಬಳಿಯ ತಲಪಾಡಿ ಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿ ಕೇರಳದ ಹೊಸಂಗಡಿ ದುರ್ಗಿಪಳ್ಳದ ನಿವಾಸಿ ಹರಿಪ್ರಸಾದ್ ಆಚಾರ್ಯ (36) ಸ್ನೇಹಿತರ ಜೊತೆ ಸೇರಿಕೊಂಡು ಸ್ನಾನ ಮಾಡಲೆಂದು ತಲಪಾಡಿಯ ಖಾಸಗಿ ಸ್ಥಳದಲ್ಲಿರುವ ಕೊಳಕ್ಕೆ ಇಳಿದಿದ್ದರು. ಈ ವೇಳೆ ಕೆಸರಿನಲ್ಲಿ ಸಿಲುಕಿದ ಹರಿಪ್ರಸಾದ್ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, …

Read More »

ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಸಮುದ್ರಪಾಲು

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಸಮುದ್ರಪಾಲಾದ ಘಟನೆ ಬೈಂದೂರು ತಾಲೂಕಿನ ಶಿರೂರು ಅಳ್ವೆ ಗದ್ದೆ ಬಳಿ ನಡೆದಿದೆ.ಗಂಗೊಳ್ಳಿ ಗ್ರಾಮದ ಮುಸಾಬ್ (22) ಮತ್ತು ನಜಾನ್‌ (24) ಸಮುದ್ರಪಾಲದ ಮೀನುಗಾರರು. ನಾಲ್ವರು ಮೀನುಗಾರರು ಬಲೆ ಬೀಸುತ್ತಿದ್ದಾಗ ನಾಲ್ವರ ಪೈಕಿ ಇಬ್ಬರು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಉಳಿದ ಇಬ್ಬರು ಕೂಡಲೇ ರಕ್ಷಣೆಗೆ ಮುಂದಾದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅವರಿಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು …

Read More »

ಡ್ರಗ್ಸ್ ಮಾಫಿಯಾ ವಿರುದ್ಧ ಮುಂದುವರಿದ ಮಂಗಳೂರು ಪೊಲೀಸರ ಕಾರ್ಯಾಚರಣೆ: ಮೂವರು ಆರೋಪಿಗಳ ಬಂಧನ

ಮಂಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ ಮಂಗಳವಾರ ಮುಂದುವರಿದಿದ್ದು, ಕಾರ್ಯಾಚರಣೆಗಳಲ್ಲಿ 10 ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗ್ಡೆ ನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಫಳ್ನೀರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬೆಂಗಳೂರಿನಿಂದ ತಂದಿದ್ದು ಎನ್ನಲಾದ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. …

Read More »

ಎ‌ಸ್.ಡಿ.ಪಿ.ಐ ಬೆಂಬಲದೊಂದಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಾಂಗ್ರೆಸ್ ಪಾಲು

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ  ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ಲಲಿತ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ವಿದ್ಯಾಲಕ್ಷ್ಮಿ ಪ್ರಭುರವರು ಆಯ್ಕೆಯಾಗಿದ್ದಾರೆ.ಈ ಸಲ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ರಚಿಸಿದ ರಣತಂತ್ರ ಯಶಸ್ವಿಯಾಯಿತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ ಉಪ್ಪಿನಂಗಡಿ ಪೇಟೆಯಲ್ಲಿ ಸಂಭ್ರಮದಿಂದ ವಿಜಯೋತ್ಸವ ನಡೀತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್ ಮಠ, ತೌಸೀಫ್ ಯು …

Read More »
Translate »
error: Content is protected !!