Breaking News

Tag Archives: national news

ರಾಜ್ಯಪಾಲರು ಬಿಲ್‌ಗೆ ಅಂಕಿತ ಹಾಕಲು ವಿಳಂಬದ ಬಗ್ಗೆ ಸುಪ್ರೀಂ ಅಸಮಾಧಾನ

ರಾಜ್ಯಪಾಲರು ಚುನಾಯಿತ ಪ್ರತಿನಿಧಿಗಳಲ್ಲ, ವಿಷಯ ಸುಪ್ರೀಂಕೋರ್ಟ್‌ಗೆ ತಲುಪುವ ಮುನ್ನವೇ ಆಯಾ ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಮೇಲೆ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ವಿಧೇಯಕಗಳನ್ನು ಅನುಮೋದಿಸುವಲ್ಲಿ ವಿಳಂಬ ಮಾಡಿದ್ದರ ವಿರುದ್ಧ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತನ್ನ ಕಳವಳ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಪೀಠ, ಈ …

Read More »

ಡಿ ಕೆ ಶಿವಕುಮಾರ್ ಹೆಸರಿನಲ್ಲಿ ಫಾಕ್ಸ್ ಕಾನ್‌‌ ಸಂಸ್ಥೆಗೆ ನಕಲಿ ಪತ್ರ: ಪ್ರಕರಣ ದಾಖಲು

ಆಪಲ್ ಏರ್‌ಪಾಡ್ಸ್ ಉತ್ಪಾದನಾ ಪಾಲುದಾರರಲ್ಲಿ ಒಂದಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಅಧ್ಯಕ್ಷರಿಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬರೆದಿದ್ದಾರೆ ಎನ್ನಲಾದ ನಕಲಿ ಪತ್ರವೊಂದು ವೈರಲ್‌ ಆಗಿದ್ದು, ಪತ್ರದಲ್ಲಿ ಆಪಲ್ ಏರ್‌ಪಾಡ್ಸ್ ಉತ್ಪಾದನಾ ಘಟಕವನ್ನು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಆಗ್ರಹಿಸಲಾಗಿದೆ.ಪತ್ರ ವೈರಲ್ ಆದ ಕೂಡಲೇ ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಪಕ್ಷವು ಎಕ್ಸ್‌ನಲ್ಲಿ ಕರ್ನಾಟಕ ಸರ್ಕಾರ ಹೈದರಾಬಾದ್ ವಿರುದ್ಧ ದೊಡ್ಡ ಪಿತೂರಿ ಮಾಡಿದೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು …

Read More »

ನ್ಯಾಯಾಲಯದ ತೀರ್ಪು ಶಾಸಕಾಂಗ ನೇರವಾಗಿ ರದ್ದುಪಡಿಸುವಂತಿಲ್ಲ: ಸಿಜೆಐ ಚಂದ್ರಚೂಡ್

ನ್ಯಾಯಾಲಯದ ತೀರ್ಪನ್ನು ಶಾಸಕಾಂಗ ನೇರವಾಗಿ ತಳ್ಳಿಹಾಕಲು ಅಥವಾ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಾಂಗದ ಆದೇಶದಲ್ಲಿನ ನ್ಯೂನತೆಯನ್ನು ಸರಿಪಡಿಸಲು ಶಾಸಕಾಂಗವು ಹೊಸ ಕಾನೂನನ್ನು ಜಾರಿಗೊಳಿಸುವ ಆಯ್ಕೆಯನ್ನು ಬಳಬಹುದು ಎಂದು ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಹಮ್ಮಿಕೊಂಡಿದ್ದ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಡಿ ವೈ ಚಂದ್ರಚೂಡ್, ತಾವು ನೀಡಿದ ತೀರ್ಪಿನ ಬಗ್ಗೆ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ನ್ಯಾಯಮೂರ್ತಿಗಳು ಚಿಂತಿಸುವುದಿಲ್ಲ. ಇದು ಚುನಾಯಿತ …

Read More »

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ ಲೋಕಸಭೆ ಸೆಕ್ರೆಟರಿಯೇಟ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿದೆ ಎಂದು ಪಿಟಿಐ ವರದಿ ಮಾಡಿದೆ.ಮುಂದಿನ ನ್ಯಾಯಾಂಗ ತೀರ್ಪು ಬರುವವರೆಗೂ ಸದನದಿಂದ ಫೈಝಲ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿದೆ ಎಂದು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಈ ವರ್ಷ ಅವರನ್ನು ಎರಡನೇ ಬಾರಿಗೆ ಅಕ್ಟೋಬರ್ 4 …

Read More »

ಮೈ ಲಾರ್ಡ್’ ಎನ್ನುವುದನ್ನು ನಿಲ್ಲಿಸಿ, ನನ್ನ ಅರ್ಧ ಸಂಬಳ ನೀಡುತ್ತೇನೆ: ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಕೀಲರು ಪದೇ ಪದೇ “ಮೈ ಲಾರ್ಡ್” ಮತ್ತು “ಯುವರ್ ಲಾರ್ಡ್‌ಶಿಪ್ಸ್” ಎಂದು ಸಂಬೋಧಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮೈ ಲಾರ್ಡ್ಸ್’ ಎಂದು ಎಷ್ಟು ಬಾರಿ ಹೇಳುತ್ತೀರಿ? ನೀವು ಇದನ್ನು ಹೇಳುವುದನ್ನು ನಿಲ್ಲಿಸಿದರೆ, ನನ್ನ ಸಂಬಳದಲ್ಲಿ ಅರ್ಧದಷ್ಟು ನೀಡುತ್ತೇನೆ,” ಎಂದು ಹಿರಿಯ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರ ಪೀಠದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ವಕೀಲರಿಗೆ ಹೇಳಿದರು.ಬುಧವಾರ ಸಾಮಾನ್ಯ ವಿಷಯದ ವಿಚಾರಣೆಯ ಸಂದರ್ಭದಲ್ಲಿ ವಕೀಲರು ನ್ಯಾಯಾಧೀಶರನ್ನು “ಮೈ …

Read More »

ಉಮರ್ ಖಾಲಿದ್ ವಿರುದ್ದದ UAPA ಪ್ರಕರಣ: ಕೇಂದ್ರ ಸರಕಾರಕ್ಕೆ ನೊಟೀಸ್‌ ನೀಡಿದ ಸುಪ್ರೀಂಕೋರ್ಟ್‌

ಯುಎಪಿಎಯಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಕೇಂದ್ರ ಸರಕಾರಕ್ಕೆ ನೊಟೀಸ್‌ ನೀಡಿದೆ.ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ(ಯುಎಪಿಎ) ವಿವಿಧ ನಿಬಂಧನೆಗಳಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಉಮರ್ ಖಾಲಿದ್ ಸಲ್ಲಿಸಿರುವ ಮನವಿಯ ಕುರಿತು ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ನೊಟೀಸ್ ನೀಡಿ ಪ್ರತಿಕ್ರಿಯೆ ಕೇಳಿದೆ.ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ಈ ಕುರಿತ ಅರ್ಜಿಗಳನ್ನು …

Read More »

ಛತ್ತೀಸಗಢದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ: ರಾಹುಲ್ ಗಾಂಧಿ

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಶುವಿಹಾರದಿಂದ ಸ್ನಾತಕೋತ್ತರ ಹಂತದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಿಸಿದರು.ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಂಡರೆ ಬುಡಕಟ್ಟು ಸಮುದಾಯಗಳಿಂದ ಖರೀದಿಸುವ ಟೆಂಡು ಪಟ್ಟದ (ಬೀಡಿ ಎಲೆ) ಬೆಲೆಯನ್ನು ಗುಣಮಟ್ಟದ ಚೀಲಕ್ಕೆ 4,000 ರೂ.ಗೆ ಹೆಚ್ಚಿಸುವುದಾಗಿ ಮತ್ತು ಇತರ ಸಣ್ಣ ಅರಣ್ಯ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು 10 …

Read More »

ಅ.31ರಂದು ಸಂಸದೀಯ ಸಮಿತಿಯ ಮುಂದೆ ಹಾಜರಾಗುವುದಿಲ್ಲ: ಮಹುವಾ ಮೊಯಿತ್ರಾ

ಅಕ್ಟೋಬರ್ 31ರಂದು ತಮ್ಮ ವಿರುದ್ಧ ಪ್ರಶ್ನೆಗಾಗಿ ಹಣ ಪಡೆದ ಆರೋಪದ ವಿಚಾರಣೆ ನಡೆಸುತ್ತಿರುವ ಸಂಸದೀಯ ಸಮಿತಿಯ ಮುಂದೆ ತಾನು ಹಾಜರಾಗುವುದಿಲ್ಲ” ಎಂದು ತೃಣಮೂಲ ಸಂಸದೆ ಮಹುವಾ ಮೊಯಿತ್ರಾ  ಹೇಳಿದ್ದಾರೆ.ಸಮಿತಿಯು ನಿರ್ಧರಿಸಿದ ದಿನಾಂಕವಾದ ಅಕ್ಟೋಬರ್ 31 ರಂದು ಸಮಿತಿಯ ಮುಂದೆ ಹಾಜರಾಗಲು ನನಗೆ ಸಾಧ್ಯವಿಲ್ಲ. ಪರ್ಯಾಯವಾಗಿ, ನವೆಂಬರ್ 5ರ ನಂತರ ಸಮಿತಿಯ ಯಾವುದೇ ದಿನಾಂಕ ಮತ್ತು ಸಮಯದಲ್ಲಿ ಸಮಿತಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಬಹುದು ಎಂದು ಮಹುವಾ ಮೊಯಿತ್ರಾ ತಮ್ಮ ಉತ್ತರದಲ್ಲಿ ಬರೆದಿದ್ದಾರೆ. …

Read More »

INDIA ವನ್ನು ಭಾರತ್ ಎಂದು ಬದಲಿಸುವ NCERT ಪ್ರಸ್ತಾಪ ತಿರಸ್ಕರಿಸಿದ ಕೇರಳ ಸರ್ಕಾರ

ಶಾಲಾ ಪಠ್ಯಪುಸ್ತಕಗಳಲ್ಲಿ ದೇಶದ ಹೆಸರನ್ನು ‘INDIA’ ಬದಲಿಗೆ ‘ಭಾರತ್’ ಎಂದು ಮಾಡಬೇಕು ಎಂಬ ಎನ್‌ಸಿಇಆರ್‌ಟಿ ಉನ್ನತ ಮಟ್ಟದ ಸಮಿತಿಯ ಶಿಫಾರಸನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವುದಿಲ್ಲ” ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಗುರುವಾರ ಹೇಳಿದ್ದಾರೆ.ಸಂವಿಧಾನದಲ್ಲಿ ಹೇಳಿರುವಂತೆ INDIA ಅಥವಾ ಭಾರತ ಎಂದು ಬಳಸುವ ಹಕ್ಕು ನಾಗರಿಕರಿಗೆ ಇದೆ. ಅವರು ಈಗ ದೇಶದ ಹೆಸರನ್ನು ಭಾರತ ಎಂದು ಮಾತ್ರ ಬಳಸಬೇಕು ಎಂದು ಹೇಳುತ್ತಿರುವುದು ಸಂಕುಚಿತ ರಾಜಕೀಯ, ಇದನ್ನು ಕೇರಳ ಒಪ್ಪಿಕೊಳ್ಳಲು …

Read More »

477 ಕೇಬಲ್ ಟಿವಿ ಆಪರೇಟರ್‌ಗಳ ನೋಂದಣಿ ರದ್ದುಗೊಳಿಸಿದ ಸಚಿವಾಲಯ

ವಿವಿಧ ಉಲ್ಲಂಘನೆಗಳು ಮತ್ತು ನಿಯಮಗಳ ಪಾಲನೆಯಲ್ಲಿ ವೈಫಲ್ಯಗಳಿಗಾಗಿ ಹಲವು ಕೇಬಲ್ ಟೆಲಿವಿಷನ್ ಸಿಸ್ಟಮ್‌ಗಳನ್ನು ನಡೆಸುತ್ತಿರುವ 477 ಮಲ್ಟಿ ಸಿಸ್ಟಮ್ ಆಪರೇಟರ್‌ಗಳ ನೋಂದಣಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರದ್ದುಗೊಳಿಸಿದೆ.MSOಗಳು ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ನಿಯಂತ್ರಣ) ಕಾಯ್ದೆಯ ನಿಬಂಧನೆಗಳನ್ನು ಮತ್ತು ಅವುಗಳಡಿಯ ನಿಯಮಗಳನ್ನು ಪಾಲಿಸಬೇಕು ಮತ್ತು ಇತರ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು ಎನ್ನುವುದು ನೋಂದಣಿ ಷರತ್ತುಗಳಲ್ಲೊಂದಾಗಿದೆ.ಷರತ್ತು ಮೀರಿದರೆ ನೀಡಲಾದ ಅನುಮತಿಯನ್ನು ರದ್ದುಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು. ಎಂಎಸ್‌ಒಗಳು ತಮ್ಮ ಚಂದಾದಾರರ ಪಟ್ಟಿಯನ್ನು ಮತ್ತು ಕಾಲಕಾಲಕ್ಕೆ …

Read More »
Translate »
error: Content is protected !!